ರಾಜಕೀಯ ವಿವಿಧತೆಯಲ್ಲಿ ಏಕತೆ, ಏಕೆ - ಏನು; ಒಂದು ಓರೇ ನೋಟ!
ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಹೆಗ್ಗಳಿಕೆ. ಇದನ್ನು ಎಲ್ಲಾ ಪಕ್ಷಗಳು ಅವಿರೋಧವಾಗಿ ಒಪ್ಪುತ್ತವೆ. ವಿಪರ್ಯಾಸವೆಂದರೆ ಎಲ್ಲ ರಂಗಗಳಲ್ಲೂ ಇರುವ ವಿವಿಧತೆಯನ್ನು ಮಾತಿಗಾದರೂ ಒಪ್ಪುವ ನಮ್ಮ ರಾಜಕೀಯ ಪಕ್ಷಗಳು ಅವಕ್ಕೇ ಸಂಭಂದಿಸಿದ ರಾಜಕೀಯ ವ್ಯವಸ್ಥೆ ಅಥವಾ ರಾಜಕೀಯ ವಿವಿಧತೆಯನ್ನು ಒಪ್ಪುವುದಿಲ್ಲ.
ನನಗೆ ಅನಿಸುವುದೇನೆಂದರೆ,
ಭಾರತದ ಸ್ವಾತಂತ್ರೋತ್ತರ 70 ವರ್ಷಗಳ ಸಾಧನೆ ಅಥವಾ ಸಾಧಿಸಲಾಗದಕ್ಕೆ ಮೂಲತಃ ಕಾಂಗ್ರೇಸ್ ಅಥವಾ ಆಯಾ ಕೇಂದ್ರ ಸರಕಾರಗಳು ಎಷ್ಟು ಕಾರಣವೋ, ನಮ್ಮ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ, ಜನತಾದಳ, ಎಡ, ಬಲ, ಸಮಾಜವಾದಿ, ಬಿಜು, ಬಹುಜನ, ತೃಣಮೂಲ, ಶಿವಸೇನೆ, ಎನ್ಸಿಪಿ ಇತ್ಯಾದಿ ಇತ್ಯಾದಿ ಪಕ್ಷಗಳು ಅಷ್ಟೆ ಕಾರಣೀಕರ್ತರು. ಕೇಂದ್ರ ಸರ್ಕಾರ ಏನೇ ಜಾರಿಮಾಡಿದರೂ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ದೇಶದ ಎಷ್ಟೋ ರಾಜ್ಯಗಳಲ್ಲಿ ಆವು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ. ಭಾರತದಲ್ಲಿ ಕಾಂಗ್ರೇಸ್ ಅಥವಾ ಬೀಜೇಪಿ ಬಲವುಳ್ಳ ರಾಜ್ಯಗಳು ಸಾಧಿಸಲಾಗದ ಎಷ್ಟೋ ಕಾರ್ಯಗಳನ್ನು ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಲ್ಲಿ ಮಾಡಿ ತೋರಿಸಿದ ಉದಾಹರಣೆ ಬಹಳಷ್ಟಿವೆ. ತಮಿಳುನಾಡಿನಿಂದ ಅನೇಕ ವಿಜ್ಞಾನಿಗಳು, ರಾಷ್ಟ್ರಪತಿಗಳು, ಕಲೆಗಾರರೂ, ಬಂಗಾಳದಿಂದ ಅನೇಕ ಕವಿಗಳು, ಕೇರಳದ ಹೋಟೆಲ್ಲುಗಳೂ, ಪೂರ್ವೋತ್ತರ ರಾಜ್ಯಗಳ ಅನೇಕಾನೇಕ ಸಾಧಕರೂ ಭಾರತದ ಯಶಸ್ಸಿನ ಭಾಗವಾಗಿದ್ದಾರೆ. ರಾಜಕೀವಾಗಿಯೂ ಡಿಎಂಕೆಯ ಕರುಣಾನಿಧಿ, ಸಿಪಿಎಂನ ಜ್ಯೋತಿ ಬಸು, ಬಿಜು ಜನತಾದಳದ ಪಟ್ನಾಯಕ್ ಅನೇಕ ವರ್ಷ ರಾಜ್ಯವನ್ನಾಳಿದ್ದಾರೆ. ಮಣ್ಣಿನ ಮಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ ತೃತೀಯ ರಂಗದ ಪರವಾಗಿ ದೇಶವನ್ನಾಳಲಿಲ್ಲವೆ?
ಚರಿತ್ರೆ ಇಷ್ಟೆಲ್ಲ ಹೇಳುವಾಗ, ಈಗಲೂ ಎಷ್ಟೋ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಆಳ್ವಿಕೆ ಇರುವಾಗ ರಾಜಕೀಯದಲ್ಲಿ ವಿವಿಧತೆಯನ್ನು ಒಪ್ಪಿಕೊಂಡು, ಅವುಗಳ ಸಾಧನೆಯನ್ನೂ ಒಪ್ಪಿಕೊಂಡು ಒಬ್ಬರಿಗೊಬ್ಬರು ಬೊಬ್ಬಿರಿಯದೆ ರಾಜಕೀಯ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲಾಗದೇ?
ಅಷ್ಟಕ್ಕೂ ಪ್ರಾಂತ್ಯ ಹಾಗೂ ಕ್ರಮೇಣ ರಾಜ್ಯಗಳಿಂದ ಭಾರತವಲ್ಲವೇ? ರಾಜ್ಯ ಸರ್ಕಾರಗಳೂ ಜನರಿಂದಲೇ ಆಯ್ಕೆಯಾದ ಸರ್ಕಾರಗಳಲ್ಲವೇ?
ಭಾರತದ ಅನೇಕ ಭಾಷೆ, ಸಂಕೃತಿ, ನಡೆ, ನುಡಿ, ಭಾವನೆ, ಆಹಾರ ಇತ್ಯಾದಿಗಳ ವಿವಿಧತೆಯನ್ನು ಗೌರವಿಸಿ ಏಕತೆಯನ್ನು ಸಾಧಿಸುವುದಾದರೆ, ಅದೇ ವಿವಿಧ ರಾಜ್ಯಗಳ ಜನರ ರಾಜಕೀಯ ತೀರ್ಪುಗಳನ್ನು ಗೌರವಿಸಿ ಏಕತೆಯನ್ನು ನಮ್ಮ ಕೇಂದ್ರ ಹಾಗೂ ರಾಜ್ಯ ಪಕ್ಷಗಳು ಸಾಧಿಸಬಾರದ್ದೇಕೆ?
ಆಯಾ ರಾಜ್ಯಗಳ ಸಂಕೃತಿ ಕಲೆ ಸಾಧನೆಗಳೊಂದಿಗೆ ಬೆರೆತುಹೋಗಿರುವ ಆಯಾ ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ನಿರ್ಣಾಮಮಾಡಿದರೆ ಆಯಾ ರಾಜ್ಯಗಳ ಕಲೆ ಸಂಸ್ಕೃತಿ ಹಾಗೂ ಯೊಚನೆಗಳನ್ನೂ ನಿರ್ಣಾಮ ಮಾಡಿದಂತೆಯೇ ಸರಿ. ಅಮೇಲೆ ಇನ್ನೆಲ್ಲಿ ವಿವಿಧತೆ ಹಾಗೂ ವಿವಿಧತೆಯಲ್ಲಿ ಏಕತೆ? ಕ್ರಮೇಣ ಭಾರತವೆಲ್ಲ ಒಂದೇ ಮನಸ್ಸು ಹಾಗೂ ಆಚರಣೆಯದರೆ; ಪ್ರವಾಸಿಗರು ಭಾರತ ಸುತ್ತುವ ಬದಲು ಕೇವಲ ಮುಂಬೈ ಅಥವಾ ಬೆಂಗಳೂರಿಗೆ ಬಂದು ಹೋದರೆ ಸಾಕಲ್ಲವೇ? ಭಾರತೀಯರಲ್ಲ ಆನ್ನ ಸಾಂಬಾರ್ ಮಾತ್ರ ತಿಂದರೆ ಸಾಕೇ? ಇಡೀ ಭಾರತ ಹಿಂದಿಯೋ ಅಥವಾ ಬೇರಾವುದೋ ಭಾಷೆ ಮಾತಾಡಿದರೆ ಸಾಕೇ? ಭಾರತೀಯರೆಲ್ಲರೂ ಸೀರೆ ಹಾಗೂ ಪಂಚೆ ಶಲ್ಯ
ಉಟ್ಟರೆ ಆಯಿತೇ? ಭಾರತೀಯರೆಲ್ಲ ಒಂದೇ ಆಟ ಆಡಿದರಾಯಿತೇ?
ಕೊನೆಯ ಅಪ್ಪುಗೆ....
ವಿವಿಧತೆಯಿಂದ ಪ್ರಾದೇಶಿಕತೆ! ಪ್ರಾದೇಶಿಕತೆಯಿಂದ ರಾಜ್ಯ, ರಾಜಕೀಯ ಪಕ್ಷಗಳು! ರಾಜ್ಯಗಳಿಂದ ದೇಶ! ರಾಜ್ಯಗಳಿಂದ ದೇಶವಾದರೆ ಸವಿಯುವುದಕ್ಕೆ ವಿವಿಧ ಆಹಾರ, ಉಡುವುದಕ್ಕೆ ವಿವಿಧ ಬಟ್ಟೆಗಳು, ಮಾತಾಡುವುದಕ್ಕೆ ವಿವಿಧ ಭಾಷೆಗಳೂ, ಆಡುವುದಕ್ಕೆ ಅನೇಕ ಆಟಗಳೂ ಇತ್ಯಾದಿಗಳೂ!
ಅದೇ ದೇಶದಿಂದ ರಾಜ್ಯಗಳಾದರೆ ಒಂದೇ ತಿಂಡಿ, ಒಂದೇ ಭಾಷೆ, ಒಂದೇ ಕಲೆ, ಒಂದೇ ರಾಜ, ಒಂದೇ ವಸ್ತ್ರವಿನ್ಯಾಸ!
ಎರಡನ್ನೂ ಹೇಗೆ ಬೆರೆಸುತ್ತೀರಿ ನಿಮಗೇ ಬಿಟ್ಟಿದ್ದು :)

Very nicely put up. Totally agree
ReplyDeleteಡಿಯರ್ ಅಜಯ್ !
ReplyDeleteನಿಮ್ಮದು ಅದ್ಭುತ ಚಿಂತನೆ,
ಅದಮ್ಯ ಕಾಳಜಿ
ಅಪರೂಪದ ಹೃದಯ
ಅನನ್ಯ ಪ್ರಬಂಧ
ನಿಮಗಿದೋ ನನ್ನ ನಮನ
ಕೋಟಿ ಕೋಟಿ ಪ್ರಣಾಮ !
- ಎ.ಎಸ್. ಚಂದ್ರಮೌಳಿ,
ರಾಷ್ಟ್ರ ಪ್ರೇಮಿ, ಮಾರ್ಗದರ್ಶಕ, ದೂರದೃಷ್ಟಿಯ ಪ್ರಚುರಕ