ಮತದಾನವನ್ನು ಕಡ್ಡಾಯ ಗೊಳಿಸುವುದ್ದಕ್ಕೆ ಮುನ್ನ..
ಸುಸಜ್ಜಿತ, ಸುಶಿಕ್ಷಿತ, ಸುರಕ್ಷಿತ, ಶಕ್ತಿಯುತ ಬೆಂಗಳೂರಿನಲ್ಲೇ ಯಾವಾಗಲೂ ಕೇವಲ ಶೇಕಡಾ 50 ರಷ್ಟು ಮತದಾನ ವಾಗುವುದನ್ನು ನೋಡಿ, ನಮ್ಮ ಗ್ರಾಮೀಣ ನಿಸ್ವಾರ್ಥ ಪ್ರಜೆಗಳು ಬೆಂಗಳೂರಿನ ಮತದಾರರಿಗೆ ಕ್ಯಾಕರಿಸಿ ಉಗಿಯುತ್ತಿದ್ದು, ಅದರಲ್ಲೂ ಐಟಿ ಬಿಟಿ ಉದ್ಯೋಗಿ ಗಳ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದು, ಇದೇ ವೇಳೆ ಮತದಾನವನ್ನು ಕಡ್ಡಾಯ ಗೊಳಿಸಬೇಕು ಎಂಬ ಅಭಿಪ್ರಾಯ ಮಂಡಿಸುತ್ತಿರುವ ಈ ಹೊತ್ತಿನಲ್ಲಿ...
ಮತದಾನ ಕಡ್ಡಾಯಕ್ಕೆ ಮುನ್ನ
ಈ ಕೆಳಕಂಡ ಸುಧಾರಣೆಗಳು ಈಗಿನ ಭಾರತಕ್ಕೆ ಅತ್ಯಂತ ಅವಶ್ಯಕ ವಾಗಿವೆ. ಇಲ್ಲದಿದ್ದಲ್ಲಿ ನಾವು ಮತ್ತದೇ ಅಯೋಗ್ಯರನ್ನು ಶೇಕಡಾ ನೂರರಷ್ಟು ಮತದಾನ ಮಾಡಿಯೂ ಆಯ್ಕೆಮಾಡಿ ದಂತೆ ಆಗುತ್ತದೆ.
ಈ ಕೆಳಕಂಡ ಸುಧಾರಣೆಗಳು ಈಗಿನ ಭಾರತಕ್ಕೆ ಅತ್ಯಂತ ಅವಶ್ಯಕ ವಾಗಿವೆ. ಇಲ್ಲದಿದ್ದಲ್ಲಿ ನಾವು ಮತ್ತದೇ ಅಯೋಗ್ಯರನ್ನು ಶೇಕಡಾ ನೂರರಷ್ಟು ಮತದಾನ ಮಾಡಿಯೂ ಆಯ್ಕೆಮಾಡಿ ದಂತೆ ಆಗುತ್ತದೆ.
ಎಲ್ಲವನ್ನೂ ನಾವು, ನಾವೇ ಹಾರಿಸಿದ, ಜನಪ್ರತಿನಿಧಿ ಗಳ ಕೈಗೆ ಕೊಟ್ಟು, ನಾವುಗಳು ಕಣ್ಮುಚ್ಚಿ ಕೈಕಟ್ಟಿ ಕುಳಿತಿದ್ದೇವೆ. ಎಲ್ಲವೂ ಶಾಸನದ ರೂಪದಲ್ಲಿ, ಅವರಿಂದಲೇ ಕಾರ್ಯರೂಪಕ್ಕೆ ಬರಬೇಕಾಗಿರುವುದರಿಂದ, ಮೊದಲು ನಮ್ಮ ನಾಯಕರು ಅವರ ಬಹು-ಮುಖಗಳನ್ನು ಪಾರ್ಲಿಮೆಂಟ್ ನ ಕನ್ನಡಿಯಲ್ಲಿ ನೋಡಿಕೊಂಡು ಅವರ ಆಯ್ಕೆಗೇ ಸಂಭಂದಿಸಿದ ಕೆಲ ಸುಧಾರಣೆಗಳನ್ನು ಮಾಡುವುದು ಮೊದಲ ಆದ್ಯತೆ ಆಗಬೇಕು.
ನಾವು ಆರಿಸುವ ನಾಯಕ ಕ್ರಿಮಿನಲ್ ಹಿನ್ನೆಲೆ ಇಲ್ಲದವಾನಾಗಿರಬೇಕು. ಅದಕ್ಕೆ ಸರಿಯಾದ ಮಾನದಂಡಗಳನ್ನು ರೂಪಿಸಬೇಕು.
ಆತ ಮುಂದಿನ ದಶಕದಲ್ಲಿ ಆದರೂ ಸರಿ, ಪದವಿಯೋ ಅಥವಾ ಸಾಧಾರಣ ಶೈಕ್ಷಣಿಕ ಅರ್ಹತೆ ಉಳ್ಳವನು ಆಗಿರಬೇಕು. ಎಲ್ಲ ಕೆಲಸಕ್ಕೂ ವಿದ್ಯಾರ್ಹತೆ ಕೇಳುವಾಗ ದೇಶ ಮುನ್ನಡೆಸುವ ಕಾವಲುಗಾರ ನಿಗೆ ವಿಧ್ಯೆ ಬೇಡವೇ? ಅಷ್ಟಕ್ಕೂ ಈಗ ನಾವು 10 ತರಗತಿಯ ತನಕ ಓದನ್ನು ಕಡ್ಡಾಯ ಮಾಡಿದ್ದೇವೆ.
ಆತ ತನ್ನ ಸಾಮಾಜಿಕ ಕಳಕಳಿಯನ್ನು ಸರಿಯಾದ ಮೂಲಗಳ ಪ್ರಕಾರ ಚುನಾವಣೆಗೆ ನಿಲ್ಲುವ ಮೊದಲೇ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅಧಿಕಾರಕ್ಕೆ ಅವ ಶಾರ್ಟ್ಕಟ್ ಇಡಿದಹಾಗೆ ಕಾಣುತ್ತದೆ.
ಪಾರ್ಲಿಮೆಂಟ್ ನಲ್ಲಿ ಸ್ವತಂತ್ರವಾಗಿ ಆಯ್ಕೆಯಾದ ಅಭ್ಯರ್ಥಿಗೆ ಮನ್ನಣೆ ನೀಡಬೇಕು. ಯಾವ ಪಕ್ಷಗಳ ನೇರ ಹಂಗಿಲ್ಲದೆ ಗೆದ್ದು ಬಂದವನಿಗೆ ವಿಶೇಷ ಶಕ್ತಿ ಇರುತ್ತದೆ.
ಕುಟುಂಬ ರಾಜಕಾರಣಕ್ಕೆ ಯಾವುದಾದರೂ ರೀತಿಯಲ್ಲಿ ಕಡಿವಾಣ ಬೀಳಬೇಕು. ಪೀಳಿಗೆಯ ಆಧಾರದಲ್ಲಿ ಅಥವ ಸಂಖ್ಯೆಗಳ ಆದಾರದಲ್ಲಿ ಅಥವಾ ಇನ್ಯಾವುದೇ ಮಾನದಂಡದ ಆಧಾರದ ಮೇಲೆ ಕುಟುಂಬ ರಾಜಕಾರಣವನ್ನು ನಿಯಂತ್ರಿಸಬೇಕು.
ಭಾರತ ಕ್ರಿಕೆಟ್ ಆಡಳಿತ ಸಂಸ್ಥೆಯ ಮುಖ್ಯಸ್ಥನ ಆಡಳಿತ ಅವದಿ ಒಂದು ಭಾರಿಗೆ ಎರಡು ಅವಧಿ ಮಾತ್ರ ಹಾಗೂ ಅವನು ಮತ್ತೊಮ್ಮೆ ಆಯ್ಕೆ ಆಗುವುದಕ್ಕೆ ಸ್ವಲ್ಪ ವರ್ಷಗಳ ವಿಶ್ರಾಂತಿ ಅಗತ್ಯ ಎಂಬ ನಿಯಮ ಸುಪ್ರೀಂ ಕೋರ್ಟ್ ಒಪ್ಪಿಕೊಂಡ ಮೇಲೆ ಇಡೀ ಭಾರತದ ಹೊಣೆ ಹೊತ್ತವರ ಬಗ್ಗೆ ಯೋಚಿಸಿ ನೋಡಿ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಐದು ಅಥವಾ ಆರಾರು ಭಾರಿ ಸಂಸದರಾಗಿ ಒಂದೇ ಕ್ಷೇತ್ರದಿಂದ ಆಯ್ಕೆಯಾದ ಸಂಸದರ ಕ್ಷೇತ್ರಗಳನ್ನು ಒಮ್ಮೆ ಸುತ್ತಿ ಬನ್ನಿ.
ಚುನಾವಣೆಯ ಖರ್ಚು ವೆಚ್ಚ ಅತ್ಯಂತ ಪಾರದರ್ಶಕ ವಾಗಿರಬೇಕು ಹಾಗೂ ಪ್ರಚಾರಕ್ಕೆ ಹೆಚ್ಚು ಸಮೂಹ ಸಂವಹನ ದಾರಿಗಳನ್ನೆ ಆಯ್ಕೆ ಮಾಡಿಕೊಳ್ಳಬೇಕು.
ಜನರಿಗೆ ಅನಗತ್ಯ ತೊಂದರೆ ಉಂಟು ಮಾಡಬಾರದು.
ಜನರಿಗೆ ಅನಗತ್ಯ ತೊಂದರೆ ಉಂಟು ಮಾಡಬಾರದು.
ಮುಂದಿನ ಪೀಳಿಗೆ, ಮುಂದಿನ ಅಗತ್ಯ, ಮುಂದಿನ ಸಾಮಾಜಿಕ ಹಾಗೂ ವಿವಿಧ ತರದ ಬದಲಾವಣೆ ಗಳನ್ನು ಗಮನದಲ್ಲಿಟ್ಟು ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಮರು ಪರಿಶೀಲಿಸಬೇಕು.
ಇವೆಲ್ಲದರ ಜೊತೆಗೆ ಇನ್ನೂ ಆನೇಕ ಬದಲಾವಣೆ ಗಳು ಮತದಾನ ಕಡ್ಡಾಯ ಮಾಡುವುದಕ್ಕಿಂತ ತುರ್ತು ಅಗತ್ಯವಾಗಿವೆ. ಅವು ಪಾರ್ಲಿಮೆಂಟ್ ಕನ್ನಡಿಯಲ್ಲಿ ಕಾಣಿಸಿದರೂ ನಮ್ಮ ನಾಯಕರಿಗೆ ಜಾಣ ಕುರುಡುತನ.
ಅಜಯ್ ರಾಮಚಂದ್ರ
ಸ್ವತಂತ್ರ ಚಿಂತಕ
ಹುಣಸನಹಳ್ಳಿ, ಕನಕಪುರ
ಸ್ವತಂತ್ರ ಚಿಂತಕ
ಹುಣಸನಹಳ್ಳಿ, ಕನಕಪುರ
No comments:
Post a Comment
Please introduce your self before you comment, thanks !!!