Wednesday, September 11, 2019

IMPORTANCE OF ADAPTING COGNITIVE MARKETING IN AN ORGANISATION

Cognitive Marketinga big leap towards ‘inclusive customer centric marketing.’

Cognitive marketing is not all the way a new marketing function. Marketers have always sought to get into the customers’ shoe or mind to serve them and delight. Recent advancements in the field of AI and Machine learning have pushed the marketing function to great advantages and in unison greater challenges as well.

Organisations adopting the cognition based marketing models have shown significant progress in their lead and sales pipelines in comparison with the organisations who are yet espouse to the latest prediction based marketing function.

Imagine, the minute, a parent be able to predict his child’s behaviour, subsequently doesn’t he alter the messaging with his child accordingly? In turn doesn’t he able to delight the child? Here, the child, the customer is innocent doesn’t he? And a parent, the organisation, plan and execute the communication strategy.

Let’s correlate the above analogy to the modern marketing organisation and we all are smart enough to predict what would be the value added to the customer and in-turn to the marketer himself. Indeed, the customer would be delighted and attests his appreciation and naturally the marketer gets his appraisal as result.

With the above individual and group analogies we understand that the key for successful customer strategy is ‘prediction’. A better prediction is a result of much required ‘data science.’ Artificial intelligence (AI) and machine learning (ML) model based prediction and decisions are utmost relevant and reliable.

Though the ‘prediction is the key, precision what matters.’ Prediction of thoughts in the minds of customers’ could be realised significantly through cognitive techniques. However the precision in messaging is what matters. Cognitive marketing aids the organisation’s marketing think tank in accomplishing the same.

As Harriet Green, general manager of Watson Internet of Things, and Commerce and Education at IBM, told Forbes magazine, "What cognitive does is help marketers focus less on tedious day-to-day tasks and more in the bigger picture, delighting the customer. Today, marketers spend nearly 70 per cent of their time on mundane details and just 30 per cent strategizing and creating experiences for customers."

Let’s look at the major advantages of adopting cognitive marketing in an organisation:

Brand positioning: Though positioning a brand is more of an art, it must always be backed by authentic data. Cognitive marketing gives in-depth data and deep dive analysis and models which make marketers' job easy and subsequently more effective in terms of brand communication to the target market.

Econsultancy explains, cognitive marketing works much better than traditional demographic analysis that marketers' use to segment an audience. And now, the grouping would be based on real behaviour rather than implied data. This whole process is a much more effective method than generalizing customers into groups based on age, gender and location, allowing you to ensure that advertising really hits its mark.

Scientific approach: there is huge difference between a mere subjective analysis to that of objective one. Cognitive marketing is backed up by huge data analysis and empowered with AI and ML.

Synchronized channelling: Though digital marketing has electrified the channels and thus rescuing the time and variable cost, cognitive on the other hand fuels the effective messaging and emotional reach with help of AI models.

Effective campaigns: Cognitive marketing empowers the process of messaging by shifting the focus from what customers think they want to that of what they really looking for by cracking through the customer mentality or conscious. Isn’t it a step closer to ‘360 degree customer management?’

Dove Real Beauty Sketches, campaign in 2013 used women beauty consciousness and their perception to its advantage by making an effective short film.

Personalisation of content and communication: effective individual targeting is a following step after segmenting the customers based on demographics. Each segment behaves differently hence need customised messaging accordingly. Cognitive marketing assist marketers in focusing on customer mentality and his forward thinking.

Focus on the customer: Although focus on customer is a basic principle of marketing, cognitive marketing offers AI and ML based modelling and psychological advantage in designing effective ‘Account Based Marketing (ABM).’

Empowered customer: when there is message which is linked to his conscious and behaviour, it makes simpler for a customer to decide quickly and thereby reducing lead time.

Customer Loyalty: Developments in analytics backed by cognitive marketing ‘connects’ customers’ better with the organisation and it leads to cross and upselling.

To conclude, Cognitive marketing is an attempt to achieve perfection in prediction scientifically backed by data and models with the help of Artificial Intelligence. Hence, there is nothing much to debate about the workability of cognitive marketing and if there is a discussion whatsoever, it is all about the case studies of how it makes/made deference to marketers and to customers’.

By,

Ajay Ramachandra
Independent Thinker and Marketer

Saturday, April 20, 2019

ಮತದಾನವನ್ನು ಕಡ್ಡಾಯ ಗೊಳಿಸುವುದ್ದಕ್ಕೆ ಮುನ್ನ..


ಮತದಾನವನ್ನು ಕಡ್ಡಾಯ ಗೊಳಿಸುವುದ್ದಕ್ಕೆ ಮುನ್ನ..

ಸುಸಜ್ಜಿತ, ಸುಶಿಕ್ಷಿತ, ಸುರಕ್ಷಿತ, ಶಕ್ತಿಯುತ ಬೆಂಗಳೂರಿನಲ್ಲೇ ಯಾವಾಗಲೂ ಕೇವಲ ಶೇಕಡಾ 50 ರಷ್ಟು ಮತದಾನ ವಾಗುವುದನ್ನು ನೋಡಿ, ನಮ್ಮ ಗ್ರಾಮೀಣ ನಿಸ್ವಾರ್ಥ ಪ್ರಜೆಗಳು ಬೆಂಗಳೂರಿನ ಮತದಾರರಿಗೆ ಕ್ಯಾಕರಿಸಿ ಉಗಿಯುತ್ತಿದ್ದು, ಅದರಲ್ಲೂ ಐಟಿ ಬಿಟಿ ಉದ್ಯೋಗಿ ಗಳ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದು, ಇದೇ ವೇಳೆ ಮತದಾನವನ್ನು ಕಡ್ಡಾಯ ಗೊಳಿಸಬೇಕು ಎಂಬ ಅಭಿಪ್ರಾಯ ಮಂಡಿಸುತ್ತಿರುವ ಈ ಹೊತ್ತಿನಲ್ಲಿ... 

ಮತದಾನ ಕಡ್ಡಾಯಕ್ಕೆ ಮುನ್ನ
ಈ ಕೆಳಕಂಡ ಸುಧಾರಣೆಗಳು ಈಗಿನ ಭಾರತಕ್ಕೆ ಅತ್ಯಂತ ಅವಶ್ಯಕ ವಾಗಿವೆ. ಇಲ್ಲದಿದ್ದಲ್ಲಿ ನಾವು ಮತ್ತದೇ ಅಯೋಗ್ಯರನ್ನು ಶೇಕಡಾ ನೂರರಷ್ಟು ಮತದಾನ ಮಾಡಿಯೂ ಆಯ್ಕೆಮಾಡಿ ದಂತೆ ಆಗುತ್ತದೆ.

ಎಲ್ಲವನ್ನೂ ನಾವು, ನಾವೇ ಹಾರಿಸಿದ, ಜನಪ್ರತಿನಿಧಿ ಗಳ ಕೈಗೆ ಕೊಟ್ಟು, ನಾವುಗಳು ಕಣ್ಮುಚ್ಚಿ ಕೈಕಟ್ಟಿ ಕುಳಿತಿದ್ದೇವೆ. ಎಲ್ಲವೂ ಶಾಸನದ ರೂಪದಲ್ಲಿ, ಅವರಿಂದಲೇ ಕಾರ್ಯರೂಪಕ್ಕೆ ಬರಬೇಕಾಗಿರುವುದರಿಂದ, ಮೊದಲು ನಮ್ಮ ನಾಯಕರು ಅವರ ಬಹು-ಮುಖಗಳನ್ನು ಪಾರ್ಲಿಮೆಂಟ್ ನ ಕನ್ನಡಿಯಲ್ಲಿ ನೋಡಿಕೊಂಡು ಅವರ ಆಯ್ಕೆಗೇ ಸಂಭಂದಿಸಿದ ಕೆಲ ಸುಧಾರಣೆಗಳನ್ನು ಮಾಡುವುದು ಮೊದಲ ಆದ್ಯತೆ ಆಗಬೇಕು.

ನಾವು ಆರಿಸುವ ನಾಯಕ ಕ್ರಿಮಿನಲ್ ಹಿನ್ನೆಲೆ ಇಲ್ಲದವಾನಾಗಿರಬೇಕು. ಅದಕ್ಕೆ ಸರಿಯಾದ ಮಾನದಂಡಗಳನ್ನು ರೂಪಿಸಬೇಕು.

ಆತ ಮುಂದಿನ ದಶಕದಲ್ಲಿ ಆದರೂ ಸರಿ, ಪದವಿಯೋ ಅಥವಾ ಸಾಧಾರಣ ಶೈಕ್ಷಣಿಕ ಅರ್ಹತೆ ಉಳ್ಳವನು ಆಗಿರಬೇಕು. ಎಲ್ಲ ಕೆಲಸಕ್ಕೂ ವಿದ್ಯಾರ್ಹತೆ ಕೇಳುವಾಗ ದೇಶ ಮುನ್ನಡೆಸುವ ಕಾವಲುಗಾರ ನಿಗೆ ವಿಧ್ಯೆ ಬೇಡವೇ? ಅಷ್ಟಕ್ಕೂ ಈಗ ನಾವು 10 ತರಗತಿಯ ತನಕ ಓದನ್ನು ಕಡ್ಡಾಯ ಮಾಡಿದ್ದೇವೆ.

ಆತ ತನ್ನ ಸಾಮಾಜಿಕ ಕಳಕಳಿಯನ್ನು ಸರಿಯಾದ ಮೂಲಗಳ ಪ್ರಕಾರ ಚುನಾವಣೆಗೆ ನಿಲ್ಲುವ ಮೊದಲೇ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅಧಿಕಾರಕ್ಕೆ ಅವ ಶಾರ್ಟ್ಕಟ್ ಇಡಿದಹಾಗೆ ಕಾಣುತ್ತದೆ.

ಪಾರ್ಲಿಮೆಂಟ್ ನಲ್ಲಿ ಸ್ವತಂತ್ರವಾಗಿ ಆಯ್ಕೆಯಾದ ಅಭ್ಯರ್ಥಿಗೆ ಮನ್ನಣೆ ನೀಡಬೇಕು. ಯಾವ ಪಕ್ಷಗಳ ನೇರ ಹಂಗಿಲ್ಲದೆ ಗೆದ್ದು ಬಂದವನಿಗೆ ವಿಶೇಷ ಶಕ್ತಿ ಇರುತ್ತದೆ.

ಕುಟುಂಬ ರಾಜಕಾರಣಕ್ಕೆ ಯಾವುದಾದರೂ ರೀತಿಯಲ್ಲಿ ಕಡಿವಾಣ ಬೀಳಬೇಕು. ಪೀಳಿಗೆಯ ಆಧಾರದಲ್ಲಿ ಅಥವ ಸಂಖ್ಯೆಗಳ ಆದಾರದಲ್ಲಿ ಅಥವಾ ಇನ್ಯಾವುದೇ ಮಾನದಂಡದ ಆಧಾರದ ಮೇಲೆ ಕುಟುಂಬ ರಾಜಕಾರಣವನ್ನು ನಿಯಂತ್ರಿಸಬೇಕು.

ಭಾರತ ಕ್ರಿಕೆಟ್ ಆಡಳಿತ ಸಂಸ್ಥೆಯ ಮುಖ್ಯಸ್ಥನ ಆಡಳಿತ ಅವದಿ ಒಂದು ಭಾರಿಗೆ ಎರಡು ಅವಧಿ ಮಾತ್ರ ಹಾಗೂ ಅವನು ಮತ್ತೊಮ್ಮೆ ಆಯ್ಕೆ ಆಗುವುದಕ್ಕೆ ಸ್ವಲ್ಪ ವರ್ಷಗಳ ವಿಶ್ರಾಂತಿ ಅಗತ್ಯ ಎಂಬ ನಿಯಮ ಸುಪ್ರೀಂ ಕೋರ್ಟ್ ಒಪ್ಪಿಕೊಂಡ ಮೇಲೆ ಇಡೀ ಭಾರತದ ಹೊಣೆ ಹೊತ್ತವರ ಬಗ್ಗೆ ಯೋಚಿಸಿ ನೋಡಿ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಐದು ಅಥವಾ ಆರಾರು ಭಾರಿ ಸಂಸದರಾಗಿ ಒಂದೇ ಕ್ಷೇತ್ರದಿಂದ ಆಯ್ಕೆಯಾದ ಸಂಸದರ ಕ್ಷೇತ್ರಗಳನ್ನು ಒಮ್ಮೆ ಸುತ್ತಿ ಬನ್ನಿ.

ಚುನಾವಣೆಯ ಖರ್ಚು ವೆಚ್ಚ ಅತ್ಯಂತ ಪಾರದರ್ಶಕ ವಾಗಿರಬೇಕು ಹಾಗೂ ಪ್ರಚಾರಕ್ಕೆ ಹೆಚ್ಚು ಸಮೂಹ ಸಂವಹನ ದಾರಿಗಳನ್ನೆ ಆಯ್ಕೆ ಮಾಡಿಕೊಳ್ಳಬೇಕು.
ಜನರಿಗೆ ಅನಗತ್ಯ ತೊಂದರೆ ಉಂಟು ಮಾಡಬಾರದು.

ಮುಂದಿನ ಪೀಳಿಗೆ, ಮುಂದಿನ ಅಗತ್ಯ, ಮುಂದಿನ ಸಾಮಾಜಿಕ ಹಾಗೂ ವಿವಿಧ ತರದ ಬದಲಾವಣೆ ಗಳನ್ನು ಗಮನದಲ್ಲಿಟ್ಟು ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಮರು ಪರಿಶೀಲಿಸಬೇಕು.

ಇವೆಲ್ಲದರ ಜೊತೆಗೆ ಇನ್ನೂ ಆನೇಕ ಬದಲಾವಣೆ ಗಳು ಮತದಾನ ಕಡ್ಡಾಯ ಮಾಡುವುದಕ್ಕಿಂತ ತುರ್ತು ಅಗತ್ಯವಾಗಿವೆ. ಅವು ಪಾರ್ಲಿಮೆಂಟ್ ಕನ್ನಡಿಯಲ್ಲಿ ಕಾಣಿಸಿದರೂ ನಮ್ಮ ನಾಯಕರಿಗೆ ಜಾಣ ಕುರುಡುತನ.

ಅಜಯ್ ರಾಮಚಂದ್ರ
ಸ್ವತಂತ್ರ ಚಿಂತಕ
ಹುಣಸನಹಳ್ಳಿ, ಕನಕಪುರ

Tuesday, April 16, 2019

ಮತದಾನ ಮಹಾದಾನ ಅನ್ನೋದೆಲ್ಲ ಬದನೆಕಾಯಿ...!


ಮತದಾನ ಮಹಾದಾನ ಅನ್ನೋದೆಲ್ಲ ಬದನೆಕಾಯಿ...!

ಬಹುಶಃ ಭಾರತದಲ್ಲಿ ನಾವು ಮತದಾನದ ಅರಿವನ್ನು ಅಥವಾ ಜಾಗೃತಿ ಮೂಡಿಸಿ ದಷ್ಟು ಕ್ರಮಬದ್ದವಾಗಿ  ಏಡ್ಸ್, ಕ್ಷಯ ಅಥವಾ ಇನ್ಯಾವುದೇ ಸಾಮಾಜಿಕ ಅರಿವನ್ನು ಮೂಡಿಸಿ ದ್ದರೇ ಇಂದು ಅದರ ಸಮಸ್ಯೆ ಖಂಡಿತ ನಿವಾರಣೆ ಆಗಿರುತ್ತಿತ್ತೇನೋ.
ರಾಷ್ಟ್ರಪತಿ ಇಂದ ಇಡಿದು ಕನ್ಯಾಕುಮಾರಿಯಲ್ಲಿ ಚಹಾ ಮಾರುವವನ ತನಕ ಒಂದಲ್ಲ ಒಂದು ರೀತಿಯಲ್ಲಿ ಮತದಾನದ ಅರಿವನ್ನು ಮೂಡಿಸುವ ಕೆಲಸವಾಗುತ್ತದೆ.

ವಾಸ್ತವಿಕ ನೆಲೆಗಟ್ಟನಲ್ಲಿ ನೋಡಿದರೆ ನಾವು ಅಂದರೆ ಮುಗ್ದ ಪ್ರಜೆಗಳು (ಅದಕ್ಕೇ ರಾಜಕಾರಣಿಗಳು ನಮ್ಮ ಮೇಲೆ ಸವಾರಿ ಮಾಡುತ್ತಿರುವುದು) ಸದುದ್ದೇಶದಿಂದ ಮೂಡಿಸಿದ ಜಾಗೃತಿ ಅನೇಕಾನೇಕ ಬಾರಿ ಮತ್ತೊಬ್ಬ  ಕ್ರಿಮಿನಲ್ ಹಿನ್ನೆಲೆಯುಳ್ಳ ಅಥವಾ ಲಂಚಕೋರ ನ ಗೆಲುವಿಗೆ ಕಾರಣವಾಗುತ್ತಿದೆ.
ಒಂದು ಕ್ಷೇತ್ರ ದಲ್ಲಿ ಇಬ್ಬರು ಅಥವಾ ಮೂರಾರು ದರಿದ್ರರು (ಅಭ್ಯರ್ಥಿ ಗಳು) ಎರಡು ಅಥವಾ ಮೂರಾರು ದರಿದ್ರ ಪಕ್ಷಗಳಿಂದ ನಿಂತರೆ ಪ್ರಜೆಗಳಿಗೆ ವಾಸ್ತವಿಕವಾಗಿ ತಿಳಿದಿದ್ದರೂ ದರಿದ್ರರನ್ನೆ ಆಯ್ಕೆ ಮಾಡಬೇಕು. ಆದರೆ ಆ ದರಿದ್ರ ಗೆದ್ದರೆ ದೇಶಕ್ಕೆ ದರಿದ್ರ ಅಲ್ಲವೇ? ಮಹಾಮಾರಿಯಾದ ಕ್ಯಾನ್ಸರ್ ಒಂದು ಕೋಷದಿಂದಲೇ ತಾನೇ ಇಡೀ ದೇಹಕ್ಕೆ ಹರಡುವುದು? ಹಾಗೆಯೇ ಆಯ್ಕೆಯಾದ ಒಬ್ಬ ದರಿದ್ರ ಮತ್ತಷ್ಟು ಜಯಶಾಲಿಗಳನ್ನು ದರಿದ್ರರನ್ನಾಗಿ ಮಾಡಬಲ್ಲ. ಇಂದು ಎಷ್ಟೋ ಕ್ಷೇತ್ರ ಗಳಲ್ಲಿ ನಿಜವಾಗಿ ನಡೆಯುತ್ತಿರುವುದು ಇದೇ. ಇದೇ ನಿಜವಾದ ಸತ್ಯ.
ನೋಟ (NOTA) ಇದೆಯಲ್ಲ ಅಂತ ನೀವೇನಾದರೂ ಅಂದರೇ.. ಅದು ಬರೀ ಗಿಮಿಕ್ ಅಷ್ಟೇ. ಅದಕ್ಕೆ ಮಾನ್ಯತೆಯೇ ಇಲ್ಲ. NOTA ಗೆ ಓಟು ಹಾಕಿದವರು ಪರಿತಪಿಸ ಬೇಕಷ್ಟೇ. ಅದು ಒಂದು ನಂಬರ್ ಮಾತ್ರ. ಅದು ಅಭ್ಯರ್ಥಿಯೂ ಅಲ್ಲ ಅಥವಾ ಅದರಿಂದ ಪ್ರಯೋಜನವೂ ಇಲ್ಲ. ಹಿಂದಿನ ಚುನಾವಣೆ ಗಳಲ್ಲಿ ಅದನ್ನೇ ಸಾವಿರ ಸಾವಿರ ಸಂಖ್ಯೆಯಲ್ಲಿ ಚಲಾಯಿಸಿರುವುದು ಈಗಿನ ರಾಜಕಾರಣಿ ಗಳಿಗೆ ನಾಚಿಗೇಡಿನ ಸಂಗತಿ. ಏನೋ ಹಸಿದ ಹೊಟ್ಟೆಗೆ ಅರೆಮಜ್ಜಿಗೆ ಎಂಬಂತೆ NOTA ಒಂದು ಸಮಾಧಾನಕರ ಆಯ್ಕೆಯಾಗಬಹುದಷ್ಟೆ.
ಮತದಾನ ಮಹಾದಾನ ಅಥವಾ ನಿಮ್ಮ ಅಮೂಲ್ಯ ಮತ ದೇಶಕ್ಕೆ ಹಿತ, ಒಂದು ಮತ ಬದಲಾವಣೆ ತರಬಲ್ಲದು, ಪ್ರಜಾಪ್ರಭುತ್ವ ದಲ್ಲಿ ನಿಮ್ಮ ಹಕ್ಕು ಇತ್ಯಾದಿ ಘೋಷಣೆಗಳೆಲ್ಲ ರಾಜಕಾರಣಿಗಳು ತಮ್ಮ ಮತ ಹೆಚ್ಚು ಮಾಡಿಕೊಳ್ಳುವುದಕ್ಕೆ (ವೋಟ್ ಬ್ಯಾಂಕ್ ಇರುತ್ತದಲ್ಲ) ಮಾಡುತ್ತಿರುವ ಸ್ವಾರ್ಥ ಘೋಷಣೆಗಳಷ್ಟೇ ಹಾಗೂ "ಮತದಾನದ ಜಾಗೃತಿಗೆ ಮಾತ್ರ ರಾಜಕಾರಣಿಗಳು ಬಿಸಿಲು ಮಳೆ ಎನ್ನದೆ "ಅವರಿಗೋಸ್ಕರ" ದುಡಿಯುವುದು ಹಾಗೂ ಮುಗ್ದ ಜನರನ್ನೂ ಹಾಗೂ ಎಲ್ಲರನ್ನೂ ದಾರಿತಪ್ಪಿಸುವುದು". ಇದು ನೇರವಾಗಿ ತಮ್ಮ ಬುಡಕ್ಕೇ ಸಮಸ್ಯೆ ತರುವುದರಿಂದ ನಮ್ಮ ಬ್ರಷ್ಟ ಹಾಗೂ ಎಲ್ಲಾ ನಾಯಕರೂ ಮತದಾರರನ್ನು ಒಲಿಸಿಕೊಳ್ಳಲು ಮಾಡುವ ಕುತಂತ್ರದ ಭಾಗವಷ್ಟೇ.
ಮತದಾನ, ಅದನ್ನು ಚಲಾಯಿಸುವ ಹಕ್ಕು ಎಲ್ಲವೂ ಒಳ್ಳೆಯದಕ್ಕೇ ಆದರೂ ಇಂದು ಅದನ್ನು ವ್ಯವಸ್ಥಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುವ ಕಲೆ ನಮ್ಮ ರಾಜಕೀಯ ವ್ಯವಸ್ಥೆಗೆ ಕರಗತವಾಗಿದೆ.
ಮತದಾನ ಜಾಗೃತಿ ಎನ್ನುವುದು ಒಂದು ಕುರುಡು ಆಚರಣೆ ಯಾಗಿ ಮಾರ್ಪಾಡು ಗೊಳ್ಳುತ್ತಿದೆ ಹಾಗೂ ಜಾಗೃತಿ ಮೂಡಿಸುವವನು ತನ್ನ ಫೇಸ್ಬುಕ್ ನಲ್ಲಿಯೋ ಅಥವಾ ಮೊಬೈಲಲ್ಲಿ ಯೋ ಒಂದು ಸ್ಟೇಟಸ್ ಹಾಕಿ ತಾನು ದೇಶಸೇವೆ ಮಾಡುತ್ತಿರುವ ಹಾಗೆ ಪೋಸ್ ಕೊಡುತ್ತಿರುತ್ತಾನೆ. ವಾಸ್ತವದಲ್ಲಿ ಅವನು ಅಥವಾ ಅವಳು ಮತವನ್ನೇ ಹಾಕುವುದಿಲ್ಲ ಅಥವಾ ಯಾರಿಗೋ ತೋರಿಸಿಕೊಳ್ಳಲು ಮತ ಚಲಾಯಿಸುತ್ತಾರೆ. ಕೆಲವರಿಗೆ ಅಭ್ಯರ್ಥಿಯ ಹೆಸರೂ ಕೂಡ ಗೊತ್ತಿರುವುದಿಲ್ಲ.
ಇಷ್ಟೆಲ್ಲ ಸತ್ಯ ಆದರೂ ಪ್ರಜೆಗಳು ದಡ್ಡರೇ?
ಖಂಡಿತ ಇಲ್ಲ. ಇದಕ್ಕೆ ಉದಾಹರಣೆ, ಕಳೆದ ಬಾರಿ ಆಗಿದ್ದು ಸುಮಾರು 66 ಪರ್ಸೆಂಟ್ ಮತದಾನ ಮಾತ್ರ. ಇನ್ನು ಈ 66 ಪರ್ಸೆಂಟ್ ಮತದಾರರಲ್ಲಿ ಸುಮಾರು ಒಂದನೇ 5 ರಷ್ಟು ಜನ ಕಾಸಿನ  ರುಚಿ ನೋಡಿದ ಮೇಲೆಯೇ ಮತ ಹಾಕುವುದು. ಅದು ಕೂಡ ಸರಿಯಾಗಿ ನೋಡಿದರೆ ತಪ್ಪಲ್ಲ ಬಿಡಿ. ಚುನಾವಣೆ ಮುಗಿದ ಮೇಲೆ ಅವರನ್ನು ಕೇಳುವವರೇ ಇರುವುದಿಲ್ಲ ಅಲ್ಲವೇ...? ಅದಕ್ಕೆ ಆತ ಪಾಲಿಗೆ ಬಂದದ್ದು ಪಂಚಾಮೃತ ಎಂದು ಪ್ರೀತಿಯಿಂದ ಕೊಟ್ಟಿದ್ದನ್ನು ತೆಗೆದು ಕೊಳ್ಳದಿದ್ದರೆ ತಪ್ಪಾದೀತು ಅಲ್ಲವೇ?
ಹಾಗಿದ್ದರೆ ಮತದಾನ ಮಾಡುವುದು ತಪ್ಪೇ? ಖಂಡಿತ ಇಲ್ಲ. ಮತದಾನಕ್ಕೆ ಮುಂಚೆ ಸ್ವಲ್ಪ ಯೋಚಿಸಿ. ಸ್ವಲ್ಪ ತಿಳಿದುಕೊಳ್ಳಿ. ಸ್ವಲ್ಪ ವಿಚಾರಿಸಿ, ಸ್ವಲ್ಪ ಓದಿಕೊಳ್ಳಿ. ಅರ್ಹರನ್ನು ನಾವು ಹಾರಿಸುವ ಅವಕಾಶ ಸಿಗುತ್ತದೆಯೋ ಇಲ್ಲವೋ. ಸಿಕ್ಕ ಅವಕಾಶದಲ್ಲಿ ಉತ್ತಮರನ್ನು ಹಾರಿಸಿ.

ಆದರೆ ನಿಮ್ಮ ಜನ ನಾಯಕನನ್ನು ಆರಿಸಿದ ಮೇಲೆ ಅವನನ್ನು ಬಿಡಬೇಡಿ... ಕೆಲಸ ಮಾಡದಿದ್ದರೆ ಮಾಡಿಕೊಡುವ ತನಕ ಬಿಡಬೇಡಿ..
Elect and forget (ಚುನಾಯಿಸಿ ಮರೆಯುವುದು) ಕಡೆಯಿಂದ Elect and engage (ಚುನಾಯಿಸಿ  ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದು) ಕಡೆಗೆ ನಿಮ್ಮ ಪಯಣ ಸಾಗಲಿ.
ನಿಧಾನವಾಗಿಯಾದರೂ ಭಾರತ ಖಂಡಿತ ಬದಲಾವಣೆಯಾಗುತ್ತದೆ. ನಿಮ್ಮ ಕಾಲ ಮುಗಿಯಿತು ಅದು ನಿಮ್ಮ ಕರ್ಮ. ಮುಂದಿನ ನಿಮ್ಮ ಮಕ್ಕಳಿಗೆ ಆದರೂ ನಿಮ್ಮ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಇರಲಿ.

ದಯವಿಟ್ಟು ಮತದಾನ ಮಾಡಿ ಹಾಗೂ ಮೇಲೆ ಹೇಳಿದ್ದನ್ನು ಮರೆಯಬೇಡಿ.

ಜೈ ಹಿಂದ್

ಅಜಯ್ ರಾಮಚಂದ್ರ
ಸ್ವತಂತ್ರ ಚಿಂತಕ
ಹುಣಸನಹಳ್ಳಿ, ಕನಕಪುರ

Friday, March 16, 2018

The Agriculture of Sacrifice!

The sacrifice always pays it's debt.
You should be spiritual enough to experience the fruits of sacrifice because, the fruits of sacrifice are not directly proportional nor as as tasty as expected.
Sometimes those fruits delights you and other times it may discourage you. The taste of sacrificed fruit depends on many things and not the sacrifice alone.

Now if we talk about the time duration to get the fruit, it depends mostly on your dedication and most importantly what the divine thinks.

Divine calculator is not ordinary calculator. There 2+2 may or may not be equal to 4. Unfortunately, most of us don't realize it.
Longer it takes to get a fruit - better the lessons are and may not be the taste :-) if it takes short time, the fruit may spoil quickly but not necessarily if your dedication is uncompromised.

Good sacrifice - better the taste but not necessarily however mostly.

Dedication is the key.
It's a real experience guys!

Thank you for your time :-)
Happy Ugadi :-)

Yours,
Ajay :-)

Wednesday, October 18, 2017

ರಾಜಕೀಯ ವಿವಿಧತೆಯಲ್ಲಿ ಏಕತೆ, ಏಕೆ - ಏನು; ಒಂದು ಓರೇ ನೋಟ!

ರಾಜಕೀಯ ವಿವಿಧತೆಯಲ್ಲಿ ಏಕತೆ, ಏಕೆ - ಏನು; ಒಂದು ಓರೇ ನೋಟ!

ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಹೆಗ್ಗಳಿಕೆ. ಇದನ್ನು ಎಲ್ಲಾ ಪಕ್ಷಗಳು ಅವಿರೋಧವಾಗಿ ಒಪ್ಪುತ್ತವೆ. ವಿಪರ್ಯಾಸವೆಂದರೆ ಎಲ್ಲ ರಂಗಗಳಲ್ಲೂ ಇರುವ ವಿವಿಧತೆಯನ್ನು ಮಾತಿಗಾದರೂ ಒಪ್ಪುವ ನಮ್ಮ ರಾಜಕೀಯ ಪಕ್ಷಗಳು ಅವಕ್ಕೇ ಸಂಭಂದಿಸಿದ ರಾಜಕೀಯ ವ್ಯವಸ್ಥೆ ಅಥವಾ ರಾಜಕೀಯ ವಿವಿಧತೆಯನ್ನು ಒಪ್ಪುವುದಿಲ್ಲ.

ನನಗೆ ಅನಿಸುವುದೇನೆಂದರೆ,
ಭಾರತದ ಸ್ವಾತಂತ್ರೋತ್ತರ 70 ವರ್ಷಗಳ ಸಾಧನೆ ಅಥವಾ ಸಾಧಿಸಲಾಗದಕ್ಕೆ ಮೂಲತಃ ಕಾಂಗ್ರೇಸ್ ಅಥವಾ ಆಯಾ ಕೇಂದ್ರ ಸರಕಾರಗಳು ಎಷ್ಟು ಕಾರಣವೋ, ನಮ್ಮ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ, ಜನತಾದಳ, ಎಡ, ಬಲ, ಸಮಾಜವಾದಿ, ಬಿಜು, ಬಹುಜನ, ತೃಣಮೂಲ, ಶಿವಸೇನೆ, ಎನ್ಸಿಪಿ ಇತ್ಯಾದಿ ಇತ್ಯಾದಿ ಪಕ್ಷಗಳು ಅಷ್ಟೆ ಕಾರಣೀಕರ್ತರು. ಕೇಂದ್ರ ಸರ್ಕಾರ ಏನೇ ಜಾರಿಮಾಡಿದರೂ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ  ದೇಶದ ಎಷ್ಟೋ ರಾಜ್ಯಗಳಲ್ಲಿ ಆವು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ. ಭಾರತದಲ್ಲಿ ಕಾಂಗ್ರೇಸ್ ಅಥವಾ ಬೀಜೇಪಿ ಬಲವುಳ್ಳ ರಾಜ್ಯಗಳು ಸಾಧಿಸಲಾಗದ ಎಷ್ಟೋ ಕಾರ್ಯಗಳನ್ನು ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಲ್ಲಿ ಮಾಡಿ ತೋರಿಸಿದ ಉದಾಹರಣೆ ಬಹಳಷ್ಟಿವೆ. ತಮಿಳುನಾಡಿನಿಂದ ಅನೇಕ ವಿಜ್ಞಾನಿಗಳು, ರಾಷ್ಟ್ರಪತಿಗಳು, ಕಲೆಗಾರರೂ, ಬಂಗಾಳದಿಂದ ಅನೇಕ ಕವಿಗಳು, ಕೇರಳದ ಹೋಟೆಲ್ಲುಗಳೂ, ಪೂರ್ವೋತ್ತರ ರಾಜ್ಯಗಳ ಅನೇಕಾನೇಕ ಸಾಧಕರೂ ಭಾರತದ ಯಶಸ್ಸಿನ ಭಾಗವಾಗಿದ್ದಾರೆ. ರಾಜಕೀವಾಗಿಯೂ ಡಿಎಂಕೆಯ ಕರುಣಾನಿಧಿ, ಸಿಪಿಎಂನ ಜ್ಯೋತಿ ಬಸು, ಬಿಜು ಜನತಾದಳದ ಪಟ್ನಾಯಕ್ ಅನೇಕ ವರ್ಷ ರಾಜ್ಯವನ್ನಾಳಿದ್ದಾರೆ. ಮಣ್ಣಿನ ಮಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ ತೃತೀಯ ರಂಗದ ಪರವಾಗಿ ದೇಶವನ್ನಾಳಲಿಲ್ಲವೆ?

ಚರಿತ್ರೆ ಇಷ್ಟೆಲ್ಲ ಹೇಳುವಾಗ, ಈಗಲೂ ಎಷ್ಟೋ  ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಆಳ್ವಿಕೆ ಇರುವಾಗ ರಾಜಕೀಯದಲ್ಲಿ ವಿವಿಧತೆಯನ್ನು ಒಪ್ಪಿಕೊಂಡು, ಅವುಗಳ ಸಾಧನೆಯನ್ನೂ ಒಪ್ಪಿಕೊಂಡು ಒಬ್ಬರಿಗೊಬ್ಬರು ಬೊಬ್ಬಿರಿಯದೆ ರಾಜಕೀಯ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲಾಗದೇ?

ಅಷ್ಟಕ್ಕೂ ಪ್ರಾಂತ್ಯ ಹಾಗೂ ಕ್ರಮೇಣ ರಾಜ್ಯಗಳಿಂದ ಭಾರತವಲ್ಲವೇ? ರಾಜ್ಯ ಸರ್ಕಾರಗಳೂ ಜನರಿಂದಲೇ ಆಯ್ಕೆಯಾದ ಸರ್ಕಾರಗಳಲ್ಲವೇ?

ಭಾರತದ ಅನೇಕ ಭಾಷೆ, ಸಂಕೃತಿ, ನಡೆ, ನುಡಿ, ಭಾವನೆ, ಆಹಾರ ಇತ್ಯಾದಿಗಳ ವಿವಿಧತೆಯನ್ನು ಗೌರವಿಸಿ ಏಕತೆಯನ್ನು ಸಾಧಿಸುವುದಾದರೆ, ಅದೇ ವಿವಿಧ ರಾಜ್ಯಗಳ ಜನರ ರಾಜಕೀಯ ತೀರ್ಪುಗಳನ್ನು ಗೌರವಿಸಿ ಏಕತೆಯನ್ನು ನಮ್ಮ ಕೇಂದ್ರ ಹಾಗೂ ರಾಜ್ಯ ಪಕ್ಷಗಳು ಸಾಧಿಸಬಾರದ್ದೇಕೆ?

ಆಯಾ ರಾಜ್ಯಗಳ ಸಂಕೃತಿ ಕಲೆ ಸಾಧನೆಗಳೊಂದಿಗೆ ಬೆರೆತುಹೋಗಿರುವ ಆಯಾ ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ನಿರ್ಣಾಮಮಾಡಿದರೆ ಆಯಾ ರಾಜ್ಯಗಳ ಕಲೆ ಸಂಸ್ಕೃತಿ ಹಾಗೂ ಯೊಚನೆಗಳನ್ನೂ ನಿರ್ಣಾಮ ಮಾಡಿದಂತೆಯೇ ಸರಿ. ಅಮೇಲೆ ಇನ್ನೆಲ್ಲಿ ವಿವಿಧತೆ ಹಾಗೂ ವಿವಿಧತೆಯಲ್ಲಿ ಏಕತೆ? ಕ್ರಮೇಣ ಭಾರತವೆಲ್ಲ ಒಂದೇ ಮನಸ್ಸು ಹಾಗೂ ಆಚರಣೆಯದರೆ; ಪ್ರವಾಸಿಗರು ಭಾರತ ಸುತ್ತುವ ಬದಲು ಕೇವಲ ಮುಂಬೈ ಅಥವಾ ಬೆಂಗಳೂರಿಗೆ ಬಂದು ಹೋದರೆ ಸಾಕಲ್ಲವೇ? ಭಾರತೀಯರಲ್ಲ ಆನ್ನ ಸಾಂಬಾರ್ ಮಾತ್ರ ತಿಂದರೆ ಸಾಕೇ? ಇಡೀ ಭಾರತ ಹಿಂದಿಯೋ ಅಥವಾ ಬೇರಾವುದೋ ಭಾಷೆ ಮಾತಾಡಿದರೆ ಸಾಕೇ? ಭಾರತೀಯರೆಲ್ಲರೂ ಸೀರೆ ಹಾಗೂ ಪಂಚೆ ಶಲ್ಯ
ಉಟ್ಟರೆ ಆಯಿತೇ? ಭಾರತೀಯರೆಲ್ಲ ಒಂದೇ ಆಟ ಆಡಿದರಾಯಿತೇ?

ಕೊನೆಯ ಅಪ್ಪುಗೆ....
ವಿವಿಧತೆಯಿಂದ ಪ್ರಾದೇಶಿಕತೆ! ಪ್ರಾದೇಶಿಕತೆಯಿಂದ ರಾಜ್ಯ, ರಾಜಕೀಯ ಪಕ್ಷಗಳು! ರಾಜ್ಯಗಳಿಂದ ದೇಶ! ರಾಜ್ಯಗಳಿಂದ ದೇಶವಾದರೆ ಸವಿಯುವುದಕ್ಕೆ ವಿವಿಧ ಆಹಾರ, ಉಡುವುದಕ್ಕೆ ವಿವಿಧ ಬಟ್ಟೆಗಳು, ಮಾತಾಡುವುದಕ್ಕೆ ವಿವಿಧ ಭಾಷೆಗಳೂ, ಆಡುವುದಕ್ಕೆ ಅನೇಕ ಆಟಗಳೂ ಇತ್ಯಾದಿಗಳೂ!
ಅದೇ ದೇಶದಿಂದ ರಾಜ್ಯಗಳಾದರೆ ಒಂದೇ ತಿಂಡಿ, ಒಂದೇ ಭಾಷೆ, ಒಂದೇ ಕಲೆ, ಒಂದೇ ರಾಜ, ಒಂದೇ ವಸ್ತ್ರವಿನ್ಯಾಸ!
ಎರಡನ್ನೂ ಹೇಗೆ ಬೆರೆಸುತ್ತೀರಿ ನಿಮಗೇ ಬಿಟ್ಟಿದ್ದು :)

Tuesday, March 15, 2016